ಬೇಲೀಸ
ಮಧ್ಯ ಅಮೆರಿಕದ ಪೂರ್ವತೀರದ ಒಂದು ಪುಟ್ಟ ಸ್ವತಂತ್ರ ದೇಶ. ಇದರ ಹಿಂದಿನ ಹೆಸರು ಬ್ರಿಟಿಷ್ ಹಾಂಡುರಾಸ್.

	ಈ ದೇಶವನ್ನು ಉತ್ತರ ಮತ್ತು ವಾಯವ್ಯದಲ್ಲಿ ಮೆಕ್ಸಿಕೋ, ದಕ್ಷಿಣ ಮತ್ತು ಪಶ್ಚಿಮದಲ್ಲಿ ಗ್ವಾಟಿಮಾಲದೇಶಗಳೂ ಪೂರ್ವದಲ್ಲಿ ಕ್ಯಾರಿಬೀಯನ್ ಸಮುದ್ರವೂ ಸುತ್ತುವರಿದಿವೆ. ಕಾಯೊ, ಬೇಲೀ¸óÀ ಕಾರeóÁಲ್, ಆರೆಂಜ್‍ವಾಕ್, ಟಲೀಡೋ ಮತ್ತು ಸ್ಟಾನ್‍ಕ್ರೀಕ್ ಜಿಲ್ಲೆಗಳು. ಉತ್ತರ ಅಕ್ಷಾಂಶ 17015 ಪಶ್ಚಿಮ ರೇಖಾಂಶ 88045 ನಲ್ಲಿರುವ ಈ ದೇಶದ ವಿಸ್ತೀರ್ಣ 22,963 ಚಕಿಮೀ. ಜನಸಂಖ್ಯೆ 1,46,000 (1981). ರಾಜಧಾನಿ ಬೆಲ್‍ಮೊಪಾನ್.

	ಬೇಲೀಸದಲ್ಲಿ ಪರ್ವತಗಳು, ಉಷ್ಣವಲಯದ ಅರಣ್ಯಗಳು ಹೆಚ್ಚು. ಜೌಗು ಭೂಮಿ ಪ್ರಧಾನ. ಯುಕಟಾನ್ ಪರ್ಯಾಯ ದ್ವೀಪದಲ್ಲಿರುವ ಈ ದೇಶದ ದಕ್ಷಿಣದ ಅರ್ಧಭಾಗ ಮಾಯಾ ಪರ್ವತದಿಂದ ಆವರಿತವಾಗಿದೆ. ಮಾಯಾ ಪರ್ವತದ ಕಾಕ್ಸ್ ಕೋಂಬ್ ಬೆಟ್ಟ ಚಾಚು ಸಮುದ್ರದ ಕಡೆ ಸಾಗಿದೆ; ಆ ಬೆಟ್ಟದ ವಿಕ್ಟೋರಿಯಾ ಶಿಖರ 1122 ಮೀ ಇದೆ. ನಾಡಿನ ಉತ್ತರ ಭಾಗದ ಇಳುಕಲು ಜೌಗುಭೂಮಿ ಸಮುದ್ರಮಟ್ಟಕ್ಕೆ 60ಮೀ ಎತ್ತರದಲ್ಲಿದೆ. ಹಾಂಡೊ, ಬೇಲೀಸ ನ್ಯೂರಿವರ್ ಇಲ್ಲಿಯ ಮುಖ್ಯನದಿಗಳು. ಜಲಯಾನಕ್ಕೆ ಅನುಕೂಲವಾಗಿವೆ. ಹಾಂಡೊ ನದಿ ಉತ್ತರದಲ್ಲಿ ಮೆಕ್ಸಿಕೊ ಹಾಗೂ ಬೇಲೀ¸óÀ ನಡುವಣ ಗಡಿಯಾಗಿ ಹರಿದು ಕ್ಯಾರಿಬೀಯನ್ ಸಮುದ್ರಾಭಿಮುಖವಾಗಿ ಚೆಟೂಮಾಲ್ ಕೊಲ್ಲಿ ಸೇರುತ್ತದೆ. ಬೇಲೀ¸óÀ ನದಿ ಬೇಲೀ¸óÀ ನಗರದ ಬಳಿ ಕ್ಯಾರಿಬೀಯನ್ ಸಮುದ್ರ ಸೇರಿದರೆ ನ್ಯೂರಿವರ್ ಚೆಟೂಮಲ್ ಕೊಲ್ಲಿ ಸೇರುತ್ತದೆ.

	ಅರೆ ಉಷ್ಣವಲಯದ ಹವಾಗುಣ ಮಳೆಗಾಲ ಫೆಬ್ರುವರಿ-ಮೇ ನಡುವೆ. ವಾರ್ಷಿಕ ಸರಾಸರಿ ಮಳೆ ಉತ್ತರಭಾಗದಲ್ಲಿ 1350 ಮಿಮೀಗಳಿಂದ 4,575 ಮಿಮೀ. ಸೆಪ್ಟೆಂಬರ್-ಡಿಸೆಂಬರ್ ನಡುವೆ ಉತ್ತರದಿಂದ ಬೀಸುವ ಗಾಳಿಯಿಂದ ತಂಪು ಹವೆ. ಚಂಡಮಾರುತಗಳು ಆಗಾಗ್ಗೆ ಬೀಸುತ್ತವೆ. 1931 ಮತ್ತು 1961ರಲ್ಲಿ ಬೇಲೀಸ ನಗರ ಹಾಗೂ 1955ರಲ್ಲಿ ಕಾರeóÁಲ್ ನಗರ ಚಂಡಮಾರುತಗಳಿಂದ ನಷ್ಟಕ್ಕೊಳಗಾದುವು.

	ಈ ದೇಶದ ಅರ್ಧಭಾಗ ಕಾಡುಗಳಿಂದ ಕೂಡಿದೆ. 50 ಬಗೆಯ ವಿವಿಧ ಅರಣ್ಯ ವೃಕ್ಷಗಳಲ್ಲಿ ದೇಶದ ತೀರ ಭಾಗದಲ್ಲಿ ಮಹಾಗನಿ ಮರಗಳು ಅಧಿಕ, ದಕ್ಷಿಣದಲ್ಲಿ ನಿತ್ಯ ಹಸುರಿನ ಅರಣ್ಯವಿದೆ. ಕಾಡು ಮೃಗಗಳಲ್ಲಿ ಜಾಗರ್, ಪ್ಯೂಮ, ಟೇಪಿಯಾರ್, ಜಿಂಕೆ-ಇವನ್ನು ಹೆಸರಿಸಬಹುದು. ದೇಶದ ಆರ್ಥಿಕ ಚಟುವಟಿಕೆ ಹೆಚ್ಚಾಗಿ ವ್ಯವಸಾಯಾವಲಂಬಿತ. ಮುಖ್ಯ ಉತ್ಪಾದನೆ ಸಕ್ಕರೆ. ಜಂಬೀರ ಜಾತಿಯ ಫಲಗಳು ಮತ್ತು ಅವುಗಳ ಉಪಉತ್ಪನ್ನಗಳು ಮತ್ತು ಮರದದಿಮ್ಮಿ, ಬತ್ತ, ಗೋದಿ ಬೆಳೆಸುತ್ತಾರೆ. 320 ಕಿಮೀ ಸಮುದ್ರ ತೀರ ಹೊಂದಿರುವ ಬೇಲೀ¸óÀದಲ್ಲಿ ಸಾಕಷ್ಟು ಮೀನು ಹಿಡಿಯುವುದುಂಟು.

	ಈ ದೇಶದಲ್ಲಿ ನೀಗ್ರೋ, ನಿಗ್ರೋಯಿಡ್ ಮಿಶ್ರ ಬುಡಕಟ್ಟಿನವರು ಮತ್ತು ಒಳನಾಡಿನಲ್ಲಿ ಮಾಯಾ ಇಂಡಿಯನ್ ಜನ ವಾಸವಾಗಿದ್ದಾರೆ. ಸಮುದ್ರತೀರದ ನಗರಗಳಲ್ಲಿ ಯೂರೊಪಿನ ಹಾಗೂ ಏಷ್ಕಾದ ಜನರಿದ್ದಾರೆ. ಮುಖ್ಯ ನಗರ ಬೇಲೀಸó ಜನಭರಿತವಾದದ್ದು. ಜನಸಂಖ್ಯೆ 42,200 (1980).

	ಆಡಳಿತ ಭಾಷೆ ಇಂಗ್ಲಿಷ್, ಸ್ಪಾನಿಷ್ ಮತ್ತು ಕ್ರೀಯೋಲ್ ರೂಢಿಯಲ್ಲಿರುವ ಇತರ ಭಾಷೆಗಳು. ಇಲ್ಲಿ 6 ರಿಂದ 14 ವರ್ಷಗಳ ನಡುವಣ ಮಕ್ಕಳಿಗೆ ಕಡ್ಡಾಯ ಪ್ರಾಥಮಿಕ ಶಾಲಾಶಿಕ್ಷಣವಿದ್ದು ಅನೇಕ ತಾಂತ್ರಿಕ ಶಾಲೆಗಳಿವೆ. ಒಟ್ಟು ಶೇಕಡಾ 90 ಭಾಗ ಅಕ್ಷರಸ್ಥರು. ರೈಲು ಮಾರ್ಗಗಳಿಲ್ಲ. ಸರಕು ಸಾಗಾಟ ರಸ್ತೆ ಮತ್ತು ನದಿಗಳ ಮೂಲಕ. ಬೇಲೀ¸óÀ ನಗರದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಗರಕ್ಕೆ 16ಕಿಮೀ ದೂರದಲ್ಲಿದೆ.

	ಬೇಲೀ¸óÀ ಮಾಯಾ ಚಕ್ರಾಧಿಪತ್ಯದ (300-800) ಒಂದು ಭಾಗವಾಗಿತ್ತು. ಬ್ರಿಟಿಷ್ ಮರಕಡಿಯುವವರು ಸುಮಾರು 1638ರಲ್ಲಿ ಈ ಪ್ರದೇಶಕ್ಕೆ ಬಂದ ಮೇಲೆ ಅವರ ಹಿಂದೆ ಬ್ರಿಟಿಷ್ ವಲಸಿಗರು ಬಂದರು. ಬ್ರಿಟಿಷರು 1798ರಲ್ಲಿ ಸ್ಪೇನನ್ನು ಸೋಲಿಸಿ ಇದನ್ನು ತಮ್ಮ ವಶಮಾಡಿಕೊಂಡು 1862ರಲ್ಲಿ ಜಮೈಕದ ಆಡಳಿತಕ್ಕೆ ಸೇರಿದ ಬ್ರಿಟಿಷ್ ವಸಾಹತಾಗಿ ಪರಿಗಣಿಸಿದರು. 1884ರಲ್ಲಿ ಜಮೈಕದ ಸಂಬಂಧ ಕಡಿದು ಬ್ರಿಟಿಷ್ ವಸಾಹತು ಸ್ಥಾಪಿತವಾಯಿತು. 1821ರಲ್ಲಿ ಗ್ವಾಟಿಮಾಲ ಸ್ವತಂತ್ರವಾದಾಗ ಬ್ರಿಟಿಷ್ ಹಾಂಡುರಾಸ್ ತನಗೆ ಸೇರಿದ್ದೆಂದು ತನ್ನ ಹಕ್ಕನ್ನು ಸ್ಥಾಪಿಸಲೆತ್ನಿಸಿತು. 1859ರಲ್ಲಿ ಗ್ವಾಟಿಮಾಲ ಮತ್ತು ಬ್ರಿಟಿಷ್ ಹಾಂಡುರಾಸ್ ನಡುವೆ ಗಡಿ ಒಪ್ಪಂದವಾದರೂ ಸಮಸ್ಯೆ ಬಗೆಹರಿಯಲಿಲ್ಲ. 1964ರಲ್ಲಿ ಬ್ರಿಟಿಷ್ ಸರ್ಕಾರ ಹಾಂಡುರಾಸ್‍ನ ಹೊಸಸಂವಿಧಾನವನ್ನು ಘೋಷಿಸಿದಾಗ ಗ್ವಾಟಿಮಾಲ ಬ್ರಿಟನ್ನಿನೊಡನೆ ತನ್ನ ಸಂಬಂಧಬಿಟ್ಟಿತು. ಈ ಮಧ್ಯೆ ಸ್ವಾತಂತ್ರ್ಯಕ್ಕಾಗಿ ದೇಶದ ಜನ ತಮ್ಮ ಬೇಡಿಕೆ ಮುಂದಿಡಲಾರಂಭಿಸಿದರು. 1973ರಲ್ಲಿ ಬ್ರಿಟಿಷ್ ಹಾಂಡುರಾಸ್ ಎಂಬ ಹೆಸರನ್ನು ಬದಲಾಯಿಸಿ ಬೇಲೀಸó ಎಂದು ನಾಮಕರಣವಾಯಿತು. 1975ರಲ್ಲಿ ಗ್ವಾಟಿ ಮಾಲದ ಆಕ್ರಮಣ ಭಯ ಕಂಡುಬಂದಾಗ ವಿಶ್ವಸಂಸ್ಥೆ ಮಹಾಸಭೆ ಬೇಲೀಸóದ ಸ್ವಯಂನಿರ್ಧಾರದ ಹಕ್ಕನ್ನು ಮನ್ನಣೆ ಮಾಡಿತು. 1981 ಸೆಪ್ಟೆಂಬರ್ 21ರಂದು ಬೇಲೀ¸óÀ ಸ್ವತಂತ್ರವಾಯಿತು. ಅದೇ ವರ್ಷ ಸೆಪ್ಟೆಂಬರ್ 25ರಂದು ವಿಶ್ವಸಂಸ್ಥೆಯ ಸದಸ್ಯವೂ ದೊರೆಯಿತು.	
(ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ